ಸಹ್ಯಾದ್ರಿಯ ತಪ್ಪಲಿನಲ್ಲಿ ಬೆಚ್ಚಗೆ ಮಲಗಿದ್ದ ಶಿವಮೊಗ್ಗೆಗೆ ಒಂದು ಕಾಸ್ಮೋಪಾಲಿಟಿಯ ಸ್ಪರ್ಶ ನೀಡಿದ ಶಿವಮೊಗ್ಗ ಕಂಟ್ರೀ ಕ್ಲಬ್ ಇದೀಗ ರಜತ ಮಹೋತ್ಸವದ ಸಂಭ್ರಮದಲ್ಲಿ ಮಿಂದೇಳುತ್ತಿದೆ. ಹಿರಿಯ, ಕಿರಿಯ ಸದಸ್ಯರ ಸೂಕ್ತ ಸಲಹೆ, ಮಾರ್ಗದರ್ಶನ ಹಾಗೂ ವಿನೂತನ ಮಾರ್ಗಸೂಚಿಗಳ ಆಧಾರದ ಮೇಲೆ ಸುಸಜ್ಜಿತ ಹಾಗೂ ಸುಂದರ ಶೈಲಿಯಲ್ಲಿ ರೂಪಗೊಂಡ ಈ ಸಂಸ್ಥೆಯ ಕ್ಲಬ್ ಹೌಸ್, ಆಧುನಿಕ ವಿಶಿಷ್ಠತೆಯೊಂದಿಗೆ ರೂಪಗೊಂಡ ಕ್ಯಾಂಟೀನ್, ಸುಸಜ್ಜಿತ ಅಥಿತಿ ಕೋಣೆಗಳು, ಸ್ವಾಗತ ಕಚೇರಿ ಮತ್ತಿತರ ಸೌಲಭ್ಯಗಳೊಂದಿಗೆ ರಾಜ್ಯದ ಅತ್ಯುತ್ತಮ ಕ್ಲಬ್ ಗಳ ಸಾಲಿನಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವ ಅರ್ಹತೆ ಪಡೆದಿದೆ.
ಸಂಸ್ಥೆಯ ಪ್ರಾರಂಭದಿಂದ ಇಂದಿನವರೆಗೂ ನಮ್ಮ ಸಂಸ್ಥೆಯ ಹೆಗ್ಗುರುತಾದ ಈಜು ಕೊಳ ಹಾಗೂ ಈಜು ತರಬೇತಿ ಶಿಬಿರಗಳು ಸಂಸ್ಥೆಯ ಪಾಲಿಗೆ ಒಂದು ಮುಕುಟ ಪ್ರಾಯವಾದ ಯೋಜನೆ ಸದಸ್ಯರು ಹಾಗೂ ಕುಟುಂಬದ ಎಲ್ಲಾ ವೈಕ್ತಿಗಳಿಗೂ ಸುವ್ಯವಸ್ಥಿತ ಆರೋಗ್ಯದ ಕಲ್ಪನೆಯನ್ನು ಒಡಮೂಡಿಸುವ ಈ ಯೋಜನೆ ಪ್ರತಿ ವರ್ಷ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ.
ಸದಸ್ಯರ ಕುಟುಂಬವರ್ಗದ ಆಶಯದ ಮೇಲೆ ರೂಪುಗೊಂಡ "ಗೆಳತಿ" ಮಹಿಳಾ ವೃಂದದ ಅನುಕೂಲಗಳಿಗೆ ಪೂರಕವಾಗಿ ನಿರಂತರ ಸಭೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಸಾಮಾಜಿಕ ವಿಕಸನ ಕಾರ್ಯಕ್ರಮಗಳನ್ನುಆಯೋಜಿಸುವುದರೊಂದಿಗೆ ಸಂಪೂರ್ಣ ಕುಟುಂಬದ ಸಾಮರಸ್ಯ ಹಾಗೂ ಭೌದ್ದಿಕ ವಾತಾವರಣಕ್ಕೆ ಕಳೆಗೂಡಿಸಿದೆ.